Saturday, December 20, 2008

`ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆ

ಮಂಗಳೂರು, ಡಿ.20:ಕಥೆಗಾರ ಎಂ.ವ್ಯಾಸ ಅವರನ್ನು ತಾತ್ವಿಕ ದೃಷ್ಠಿಕೋನದಲ್ಲಿ ನೋಡುವ ಕಾರ್ಯ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಎಂ.ವ್ಯಾಸ ಅವರ ಕೊಡುಗೆ ಅಪಾರ. ಅವರ ಸಾಹಿತ್ಯಗಳು ಮುಂದಿನ ಪೀಳಿಗೆಗೂ ಉಳಿಯುವಂತಾಗಲು ಅವುಗಳನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉಳಿಯುವಂತೆ ಮಾಡಬೇಕಾಗಿದೆ. ಅವರ ಸಾಹಿತ್ಯದ ಕುರಿತಾದ ಸಿ.ಡಿ.ಗಳು, ಸಾಕ್ಷ್ಯಚಿತ್ರಗಳು ಇನ್ನೂ ಬರಬೇಕೆಂದು ಸಾಹಿತಿ,ವಿಮರ್ಷಕ ಡಾ.ಮಹಾಲಿಂಗ ಭಟ್ ಅಭಿಪ್ರಾಯಿಸಿದರು.
ಅವರು ಶನಿವಾರ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಪತ್ರಕರ್ತ ಹರೀಶ್ ಕೆ. ಆದೂರು ನಿದರ್ೇಶನದ `ವ್ಯಾಸಪಥ' ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಎಂ.ವ್ಯಾಸ ಅವರ ಸಮಗ್ರ ಕಥೆಗಳ ಸಂಕಲನವನ್ನು ಹೊರತರುವ ಚಿಂತನೆ ನಡೆಯುತ್ತಿದೆ. ವ್ಯಾಸ ಅವರ ಸ್ನೇಹ ತೆಕ್ಕೆಗೆ ಬಿದ್ದವರಿಗೆ ಮಾತ್ರ ಅವರನ್ನು ಸಮರ್ಪಕವಾಗಿ ಅರಿಯಲು ಸಾಧ್ಯವಾಗಿದೆ. ಅವರ ಕಥೆಗಳು ಮಾಮೂಲಿಗಿಂತ ಭಿನ್ನವಾದಂತಹ ವಸ್ತುಗಳನ್ನೊಳಗೊಂಡಿವೆ ಎಂದು ಅತಿಥಿಗಳಾದ ಡಾ.ವರದರಾಜ ಚಂದ್ರಗಿರಿ ವ್ಯಾಖ್ಯಾನಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಅಂಕಣಗಾರ ಯು.ಮಹೇಶ್ ಪ್ರಭು `ವ್ಯಾಸಪಥ' ಸಾಕ್ಷ್ಯಚಿತ್ರ ಸಂಗ್ರಹಯೋಗ್ಯವಾಗಿದ್ದು ಮೌಲ್ಯಾಧಾರಿತವಾಗಿ ಮೂಡಿಬಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಿದ್ದರು.
ಎಂ.ವ್ಯಾಸರ ಪುತ್ರ ತೇಜಸ್ವಿ ವ್ಯಾಸ ಅವರಿಗೆ `ವ್ಯಾಸ ಪಥ' ಸಾಕ್ಷ್ಯಚಿತ್ರದ ಸಿ.ಡಿಯನ್ನು ಹಸ್ತಾಂತರಿಸಲಾಯಿತು.
ದೀಪಿಕಾ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು. ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮೂತರ್ಿ ಸ್ವಾಗತಿಸಿದರು. ಪತ್ರಕರ್ತ ಹರೀಶ್ ಕೆ. ಆದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಅಕ್ಷತಾ ಭಟ್ ಸಿ.ಎಚ್. ವಂದಿಸಿದರು.
ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಭಾಷಾ ವಿಭಾಗ ಕಾರ್ಯಕ್ರಮ ಆಯೋಜಿಸಿತ್ತು.










































































Wednesday, December 17, 2008


20ರಂದು ವ್ಯಾಸಪಥ ಬಿಡುಗಡೆ


ಗೋ ವಿಂದ ದಾಸ ಕಾಲೇಜು, ಸುರತ್ಕಲ್ , ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹರೀಶ್ ಕೆ. ಆದೂರು ನಿದರ್ೇಶನದ `ವ್ಯಾಸಪಥ' ಕಥೆಗಾರ ಎಂ.ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇದೇ 20ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಬೆಳಗ್ಗೆ 10.30 ನಡೆಯಲಿದೆ.
ಸಾಹಿತಿ ಡಾ.ಮಹಾಲಿಂಗ ಭಟ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

Thursday, October 2, 2008


`ಪ್ರಶಸ್ತಿಯೇ ಪ್ರಾಮುಖ್ಯವಲ್ಲ'

`ನೃತ್ಯ ಸಿಂಗಾರ - 2008' ಆರಂಭ
ಸುರತ್ಕಲ್, ಅ.3- ಪ್ರಶಸ್ತಿಯೇ ಪ್ರಾಮುಖ್ಯವಾಗಿರಬಾರದು. ಸೋಲು - ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಎಂಬುದು ಅತ್ಯಂತ ಮುಖ್ಯವಾದುದು ಎಂದು ಹಿರಿಯ ನೃತ್ಯ ಕಲಾವಿದ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ `ನೃತ್ಯ ಸಿಂಗಾರ - 2008' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಸಾಂಸ್ಕೃತಿಕ ತಂಡವನ್ನು ರೂಪಿಸುವ ದೃಷ್ಠಿಯಿಂದ `ನೃತ್ಯ ಸಿಂಗಾರ' ಆಯೋಜಿಸಲಾಗಿದೆ ಎಂದು ಡಾ.ಕೆ ಚಿನ್ನಪ್ಪ ಗೌಡ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಎಂ.ಎಸ್ ಕೃಷ್ಣ ಭಟ್ ವಹಿಸಿದ್ದರು.
ಕಾಲೇಜಿನ ಸಂಚಾಲಕ ವೆಂಕಟ್ರಾವ್, ಉಪನ್ಯಾಸಕ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.
ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜ್ ಮೋಹನ್ ರಾವ್ ಸ್ವಾಗತಿಸಿದರು. ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ದೇವಪ್ಪ ಕುಳಾಯಿ ವಂದಿಸಿದರು.